ಮಿಸಳ್ ಪಾವ್ ಮಹಾರಾಷ್ಟ್ರದ ಒಂದು ಜನಪ್ರಿಯ ಖಾದ್ಯ. ಇದು ಮಿಸಳ್ (ಸಾಮಾನ್ಯವಾಗಿ ಮೊಳಕೆ ಎಬ್ಬಿಸಿದ ಮಡಿಕೆ ಕಾಳಿನಿಂದ ತಯಾರಿಸಲಾದ ಖಾರದ ಕರಿ) ಮತ್ತು ಪಾವ್ ಅನ್ನು (ಒಂದು ಬಗೆಯ ಭಾರತೀಯ ಬ್ರೆಡ್) ಹೊಂದಿರುತ್ತದೆ. ಅಂತಿಮ ಭಕ್ಷ್ಯದ ಮೇಲೆ ಆಲೂಗಡ್ಡೆ-ಚಿವ್ಡಾ ಮಿಶ್ರಣ, ಫ಼ರ್ಸಾಣ್ ಅಥವಾ ಸೇವ್, ಈರುಳ್ಳಿ, ನಿಂಬೆ ಮತ್ತು ಕೊತ್ತಂಬರಿಯನ್ನು ಉದುರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬ್ರೆಡ್ ಅಥವಾ ರೋಲ್ಸ್, ಜೊತೆಗೆ ಬೆಣ್ಣೆ ಹಾಗೂ ಮಜ್ಜಿಗೆ ಅಥವಾ ಮೊಸರು ಹಾಗೂ ಹಪ್ಪಳವನ್ನು ಹಾಕಿ ಬಡಿಸಲಾಗುತ್ತದೆ. ಇದನ್ನು ಬೆಳಿಗ್ಗೆ ತಿಂಡಿಯಾಗಿ, ಲಘು ಆಹಾರವಾಗಿ ಮತ್ತು ಪೂರ್ಣ ಊಟವಾಗಿಯೂ ಬಡಿಸಲಾಗುತ್ತದೆ. == ತಯಾರಿಕೆ == ಮಿಸಳ್ ಅನ್ನು ಭಾಗಶಃ ಮೊಳಕೆ ಎಬ್ಬಿಸಿದ ಕಾಳುಗಳಿಂದ ತಯಾರಿಸಲಾಗುತ್ತದೆ, ಇದು ಕಡಿಮೆ ಪ್ರಮಾಣದ ನೀರಿನಾಂಶವನ್ನು ಹೊಂದಿರುತ್ತದೆ, ಜೊತೆಗೆ ನೀರುನೀರಾಗಿರುವ, ಖಾರದ ಕಟ್ ಅಥವಾ ರಸ್ಸಾದಿಂದ ತಯಾರಿಸಲಾಗುತ್ತದೆ. ಇದು ಎರಡು ಭಾಗಗಳನ್ನು ಹೊಂದಿರುತ್ತದೆ, ಉಸಳಿ ಎಂದು ಕರೆಯಲಾಗುವ ಮಡಿಕೆ ಕಾಳಿನ ಗಟ್ಟಿ ಕರಿ. ನೀರುನೀರಾಗಿರುವ ರಸವನ್ನು ರಸ್ಸಾ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಜನರು ತಮ್ಮ ರುಚಿ ಹಾಗೂ ಅಗತ್ಯದ ಪ್ರಕಾರ ಇವೆರಡನ್ನೂ ಮಿಶ್ರಣ ಮಾಡುತ್ತಾರೆ. ಮಡಿಕೆ ಕಾಳು ಲಭ್ಯವಿಲ್ಲದಿದ್ದರೆ, ಕೆಲವೊಮ್ಮೆ ಇದನ್ನು ಹೆಸರು ಕಾಳು ಬಳಸಿ ತಯಾರಿಸಲಾಗುತ್ತದೆ. ಇದನ್ನು ಭಾರತೀಯ ದೊಡ್ಡ ಸೇವ್‍ನಿಂದ ಅಲಂಕರಿಸಬಹುದು. ಉಸಳಿಯನ್ನು ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಇತರ ಸಂಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. == ಉಲ್ಲೇಖಗಳು == == ಚಿತ್ರಗಳು ==